ಇಂದ್ರಗಿರಿ
ಮೈಸೂರು ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಎದುರು ಬದುರಾಗಿರುವ ಎರಡು ಬೆಟ್ಟಗಳಲ್ಲಿ ಒಂದು. ಇತಿಹಾಸ ಹಾಗೂ ಪುರಾಣ ಪ್ರಸಿದ್ಧವಾದ ಗೊಮ್ಮಟೇಶ್ವರನ ವಿಗ್ರಹ ಇರುವುದು ಈ ಬೆಟ್ಟದ ಮೇಲೆಯೇ. ಇನ್ನೊಂದು ಬೆಟ್ಟ ಚಂದ್ರಗಿರಿ.		 (ನೋಡಿ- ಚಂದ್ರಗಿರಿ-1)

ಇಂದ್ರಗಿರಿಯ ಶಿಖರ ಸಮುದ್ರ ಮಟ್ಟದಿಂದ 3250 ಎತ್ತರದಲ್ಲೂ ಊರಿನ ಮಟ್ಟದಿಂದ 400 ಎತ್ತರದಲ್ಲೂ ಇದೆ. ಇಂದ್ರಗಿರಿಯಲ್ಲಿ ಚೌವೀಸ ತೀರ್ಥಂಕರ, ಚೆನ್ನಣ್ಣ, ಬದೆಗಲ್ಲು, ತ್ರಿಕೂಟ ಮತ್ತು ಸಿದ್ಧರ ಬಸದಿಗಳು ಇವೆ. ಉತ್ತರ ದಿಕ್ಕಿಗೆ ತಿರುಗಿ ನಿಂತಿರುವ ಗೊಮ್ಮಟೇಶ್ವರ ವಿಗ್ರಹ ಈ ಬೆಟ್ಟಕ್ಕೆ ಕಳಶಪ್ರಾಯವಾಗಿದೆ.
(ನೋಡಿ- ಗೊಮ್ಮಟೇಶ್ವರ)
(ನೋಡಿ- ಶ್ರವಣಬೆಳಗೊಳ)
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ